ಸುವರ್ಣ ಪರಿವಾರ್ ಅವಾರ್ಡ್ಸ್‘೨೦೧೩ ರ ಪ್ರಶಸ್ತಿ ಪ್ರದಾನ ಸಮಾರಂಭ ಇದೇ ೧೪ ಮತ್ತು ೧೫ ರಂದು ಪ್ರಸಾರ
Posted date: 06 Fri, Sep 2013 – 10:45:47 PM

ಸ್ಟಾರ್ ನೆಟ್‌ವರ್ಕ್‌ನ ಕನ್ನಡ ಮನೋರಂಜನಾ ವಾಹಿನಿ ಸುವರ್ಣ ಈಗ ಅದರ ದ್ವಿತೀಯ ವರ್ಷದ ಸುವರ್ಣ ಪರಿವಾರ ಅವಾರ್ಡ್ಸ್-೨೦೧೩ ಇದೇ ೧೪ ಮತ್ತು ೧೫ ರಂದು ಸಂಜೆ ೬-೦೦ ಗಂಟೆಗೆ ಪ್ರಸಾರ ಮಾಡುತ್ತಿದೆ.
ಸುವರ್ಣ ಪರಿವಾರದ ಕಲಾವಿದರು, ನಿರ್ಮಾಪಕರು, ನಿರ್ದೇಶಕರು, ತಂತ್ರಜ್ಞರು ಹಾಗೂ ಇತರೆ ಸದಸ್ಯರೆಲ್ಲರುಗಳು ಒಂದೆಡೆ ನೆರೆದ ರಸಸಂಜೆಗೆ ಸುವರ್ಣ ಪರಿವಾರ್ ಪ್ರಶಸ್ತಿ ಪ್ರದಾನ ಸಮಾರಂಭ ಸಾಕ್ಷಿಯಾಗಿತ್ತು.
ಸುವರ್ಣ ಪರಿವಾರದ ತಾರೆಗಳಾದ ಅಮೃತ - ವಿಜಯ್, ನಂದಿನಿ-ಕಿಶೋರ್, ಆಕಾಶ್-ದೀಪಾ, ಚುಕ್ಕಿ,     ಮೈಲಾರಿ - ರೇಣುಕಾ, ಮೀನಾನಾಥ್ ಹಾಗೂ ಮೊದಲಾದವರು ತಮ್ಮ ನೃತ್ಯ, ನಾಟಕದಿಂದ ನೆರೆದ ಪ್ರೇಕ್ಷಕರನ್ನು ರಂಜಿಸಿದರು. ಅಲ್ಲದೇ ಕಾರ್ಯಕ್ರಮಕ್ಕೆ ಹಿರಿಯ ಕಲಾವಿದರುಗಳಾದ ಹೇಮಾಚೌದ್ರಿ, ವನಿತಾವಾಸು ಮೊದಲಾದವರನ್ನೊಳಗೊಂಡ ಸುವರ್ಣ ಪರಿವಾರವೇ ಮೇಳೈಸಿದ್ದ ರಸಮಯ ಕ್ಷಣವನ್ನು ಪರಿವಾರ್ ಅವಾರ್ಡ್ಸ್ -೨೦೧೩ ಸೃಷ್ಟಿಸಿತ್ತು.
ಸುವರ್ಣ ಪರಿವಾರ್ ಅವಾರ್ಡ್ಸ್‘೨೦೧೩ ರ ಪ್ರಾಯೋಜಕತ್ವವನ್ನು ಪೆಪ್ಸೊಡೆಂಟ್ ವಹಿಸಿದೆ.
ಪೆಪ್ಸೊಡೆಂಟ್ ಸುವರ್ಣ ಪರಿವಾರ್ ಅವಾರ್ಡ್ಸ್ ೩೨ ಕೆಟೆಗರಿಗಳನ್ನು ಹೊಂದಿದ್ದು  ಅದರಲ್ಲಿ ಕೆಲವು ಪ್ರಶಸ್ತಿ ವಿಜೇತರುಗಳು ಕೆಳಗಿನಂತಿವೆ : ನೆಚ್ಚಿನ ಧಾರಾವಾಹಿ : ಅಮೃತ ವರ್ಷಿಣಿ; ನೆಚ್ಚಿನ ಪತಿ-ಪತ್ನಿ ಜೋಡಿ: ಅಮೃತ -ವಿಜಯ್ (ಅಮೃತವರ್ಷಿಣಿ); ಪರಿವಾರದ ನೆಚ್ಚಿನ ನಟಿ  :  ಅಮೃತ (ಅಮೃತವರ್ಷಿಣಿ); ನೆಚ್ಚಿನ ಹಾಸ್ಯ ನಟ: ಮೀನಾನಾಥ್ ( ಪಂಚರಂಗಿ ಪೊಂ ಪೊಂ); ನೆಚ್ಚಿನ ಅತ್ತೆ-ಸೊಸೆ : ಅಮೃತ- ಶಕುಂತಲಾದೇವಿ(ಅಮೃತವರ್ಷಿಣಿ); ನೆಚ್ಚಿನ ಕಲಾವಿದ : ಆಕಾಶ್(ಆಕಾಶದೀಪ).
ವಾಹಿನಿಯ ಬಿಜ಼್‌ನೆಸ್ ಹೆಡ್ ಅನುಪ್ ಚಂದ್ರಶೇಖರನ್ ಹೇಳುವ ಹಾಗೆ, ಕಳೆದ ಕೆಲವು ವರ್ಷಗಳಿಂದ ನಮ್ಮ ವೀಕ್ಷಕರು ಈ ಎಲ್ಲ ಕಲಾವಿದರುಗಳ ಅಭಿನಯಿಸಿರುವ ಪ್ರತ್ಯೇಕ ಕಾರ್ಯಕ್ರಮಗಳನ್ನು ನೋಡುತ್ತಾ , ಪ್ರೋತ್ಸಾಹಿಸುತ್ತಾ ಬಂದಿದ್ದಾರೆ ಆದರೆ ಈ ಸಮಾರಂಭವು ಸಂಪೂರ್ಣ ಸುವರ್ಣ ಪರಿವಾರದ ಪ್ರತಿಭೆಗಳು ಒಂದೆಡೆ ಸೇರಿದ ಏಕೈಕ ಕಾರ್ಯಕ್ರಮ ಇದಾಗಿದೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed